ಒಫಿಯೂಚಸ್: ಹಕುರ್ಯ್‌ಲೀಸ್ ಮತ್ತು ಸ್ಕಾರ್ಪಿಯಸ್ (ವೃಶ್ಚಿಕ) ನಕ್ಷತ್ರ ಪುಂಜಗಳ ನಡುವೆ ವಿಷುವದ್ವೃತ್ತವನ್ನು ಹಾಯ್ದು ವ್ಯಾಪಿಸಿರುವ ಉತ್ತರದ ಒಂದು ನಕ್ಷತ್ರಪುಂಜ. ನಮಗೆ ಅತ್ಯಂತ ಸಮೀಪವಿರುವ ನಕ್ಷತ್ರಗಳಲ್ಲಿ ಮೂರನೆಯದಾದ (ಸೂರ್ಯ ಮತ್ತು ಪ್ರಾಕ್ಸಿಮಾ ಸೆಂಟಾರಿ ಮೊದಲಿನ ಎರಡು) ಬಾರ್ನಾರ್ಡನ ನಕ್ಷತ್ರ ಈ ಪುಂಜದಲ್ಲಿದೆ. ಹಲವಾರು ನೋವ ನಕ್ಷತ್ರಗಳನ್ನು ಒಫಿಯೂಕಸಿನಲ್ಲಿ ನೋಡಲಾಗಿದೆ. ಕೆಪ್ಲರನ ನಕ್ಷತ್ರ ಎಂಬ ಮಹಾನೋವ (1604) ಇವುಗಳಲ್ಲಿ ಪ್ರಸಿದ್ಧವಾದದ್ದು.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ